
ಅವಳ ತುಟಿಯಂಚಿನ ನಗುವ ಕಂಡಾಕ್ಷಾಣ... ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಮುಂಜಾವಿನ ಮಂಜಿನ ತಂಪನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಹಕ್ಕಿಗಳ ಚಿಲಿಪಿಲಿಯ ಇಂಪನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಮಳೆ ಹನಿಗಳ ತಾನನನ. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ವಸಂತ ಮಾಸದ ಚಿಗುರನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಜುಳುಜುಳು ಹರಿಯುವ ನದಿಯನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಕಾಣಲಾರದ ಖುಷಿಯನು.