ನಿವೇದನೆ

ನೀ, ನನ್ನ ನೋಡಲೇಬೇಕೆಂಬ
ಹಟವೇನು ಇಲ್ಲ ಗೆಳತಿss,
ನಿನ್ನಯ ಮುಖ ಕಂಡರೆ ಸಾಕೆನಗೆ.

ನೀ, ನನ್ನ ನೋಡಿ ನಗಲೇಬೇಕೆಂಬ
ಒತ್ತಾಯವೇನಿಲ್ಲ ಗೆಳತಿss,
ನೀ ಸದಾ ನಗುತ್ತಿದ್ದರೆ ಸಾಕೆನಗೆ.

ನೀ, ನನ್ನ ಮಾತಾಡಿಸದಿದ್ದರೊ
ಚಿಂತೆಯಿಲ್ಲ ಗೆಳತಿss,
ನಿನ್ನಯ ಧ್ವನಿ ಕೇಳುತ್ತಿದ್ದರೆ ಸಾಕೆನಗೆ.

ನೀ, ನನ್ನತ್ತಿರ ಬರದಿದ್ದರೊ
ಯೋಚನೆಯಿಲ್ಲ ಗೆಳತಿss,
ಹತ್ತಿರ ನೀ ಸುಳಿದರೆ ಸಾಕೆನಗೆ.

ನೀ, ನನ್ನವಳೇ ಆಗಬೇಕೆಂಬ
ಹಂಬಲವೇನಿಲ್ಲ ಗೆಳತಿss,
ನಾನಾಗಲೇ ನಿನ್ನವನಾಗಿರುವೆ ಸಾಕೆನಗೆ.

Comments

Anonymous said…
ತುಂಬ ಚೆನ್ನಾಗಿದೆ ಪದಗಳ ಜೋಡಣೆ..

ಹೀಗೆ ಸಾಗಲಿ ನಿಮ್ಮ ಬರಹ..

Popular posts from this blog

ಮಣ್ಣಿನ ಮದ