Posts

ಚುಟುಕುಗಳು ! ದಾರಿ! ಹೃದಯದಲ್ಲೆಲ್ಲೊ ಕಳೆದು ಹೋದ ಖುಷಿಗಳಿಗೆ, ಕಂಬನಿಗಳು ದಾರಿ ಮಾಡಿಕೊಟ್ಟಿವೆ! ಬದುಕು,ಮದ್ಯ,ಸಾವು,ಮತ್ತು.. ಬದುಕು ಮತ್ತು ಸಾವಿನ 'ಮದ್ಯ' ಇರುವುದು 'ಮತ್ತು'! 'ಮತ್ತು' ಮತ್ತೂ 'ಮದ್ಯ' ಹೆಚ್ಚಿದಷ್ಟೂ ಬದುಕಿನ ಮದ್ಯ ಉಳಿವುದು ಸಾವು!

ಮಣ್ಣಿನ ಮದ

  ಮಣ್ಣಿನ ಮದ ಗಗನದಿ ಪ್ರೀತಿಯ ಮತ್ತು, ಮೋಡದ ಮಿತಿ ಮೀರಿ, ಮತ್ತೆ ಮತ್ತೇರಿ, ದಾಹದಿ ಕಾದಿಹ ಭುವಿಯ ಗಲ್ಲಕ್ಕೆ ಮುತ್ತಿಕ್ಕಿದಾಗ ಹೊತ್ತಿ ಹರಡಿದ ಪರಿಮಳ!
Image
ಅವಳ ತುಟಿಯಂಚಿನ ನಗುವ ಕಂಡಾಕ್ಷಾಣ... ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಮುಂಜಾವಿನ ಮಂಜಿನ ತಂಪನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಹಕ್ಕಿಗಳ ಚಿಲಿಪಿಲಿಯ ಇಂಪನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಮಳೆ ಹನಿಗಳ ತಾನನನ. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ವಸಂತ ಮಾಸದ ಚಿಗುರನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಜುಳುಜುಳು ಹರಿಯುವ ನದಿಯನು. ಅವಳ ತುಟಿಯಂಚಿನ ನಗುವ ಕಂಡ ಕ್ಷಣ, ಕಂಡೆ ನಾ...ಕಂಡೆ ನಾ ಆ ಕಾಣಲಾರದ ಖುಷಿಯನು.
ನಿವೇದನೆ ನೀ, ನನ್ನ ನೋಡಲೇಬೇಕೆಂಬ ಹಟವೇನು ಇಲ್ಲ ಗೆಳತಿss, ನಿನ್ನಯ ಮುಖ ಕಂಡರೆ ಸಾಕೆನಗೆ. ನೀ, ನನ್ನ ನೋಡಿ ನಗಲೇಬೇಕೆಂಬ ಒತ್ತಾಯವೇನಿಲ್ಲ ಗೆಳತಿss, ನೀ ಸದಾ ನಗುತ್ತಿದ್ದರೆ ಸಾಕೆನಗೆ. ನೀ, ನನ್ನ ಮಾತಾಡಿಸದಿದ್ದರೊ ಚಿಂತೆಯಿಲ್ಲ ಗೆಳತಿss, ನಿನ್ನಯ ಧ್ವನಿ ಕೇಳುತ್ತಿದ್ದರೆ ಸಾಕೆನಗೆ. ನೀ, ನನ್ನತ್ತಿರ ಬರದಿದ್ದರೊ ಯೋಚನೆಯಿಲ್ಲ ಗೆಳತಿss, ಹತ್ತಿರ ನೀ ಸುಳಿದರೆ ಸಾಕೆನಗೆ. ನೀ, ನನ್ನವಳೇ ಆಗಬೇಕೆಂಬ ಹಂಬಲವೇನಿಲ್ಲ ಗೆಳತಿss, ನಾನಾಗಲೇ ನಿನ್ನವನಾಗಿರುವೆ ಸಾಕೆನಗೆ.