ಮಣ್ಣಿನ ಮದ

  ಮಣ್ಣಿನ ಮದ

ಗಗನದಿ ಪ್ರೀತಿಯ
ಮತ್ತು,
ಮೋಡದ
ಮಿತಿ ಮೀರಿ,
ಮತ್ತೆ ಮತ್ತೇರಿ,
ದಾಹದಿ ಕಾದಿಹ
ಭುವಿಯ ಗಲ್ಲಕ್ಕೆ
ಮುತ್ತಿಕ್ಕಿದಾಗ
ಹೊತ್ತಿ ಹರಡಿದ
ಪರಿಮಳ!



Comments

Popular posts from this blog